ಅಭಿಪ್ರಾಯ / ಸಲಹೆಗಳು

ಸಂಸ್ಥೆಯ ಪರಿಚಯ

ಕರ್ನಾಟಕ ಪಶುವೈದ್ಯಕೀಯ ಪರಿಷತ್ತು, ಸಂಸ್ಥೆಯಾಗಿದ್ದು, ಇದು ಚುನಾಯಿತ ಮತ್ತು ಸರ್ಕಾರದಿಂದ ನಾಮನಿರ್ದೇಶಿತಗೊಂಡ ವೃತ್ತಿನಿರತ ಪಶುವೈದ್ಯಕೀಯ ಸದಸ್ಯರನ್ನೊಳಗೊಂಡ ರಾಜ್ಯ ಪಶುವೈದ್ಯಕೀಯ ಪರಿಷತ್ತಿನ ಆಡಳಿತಕ್ಕೆ ಒಳಪಟ್ಟಿರುತ್ತದೆ.

ಭಾರತೀಯ ಪಶುವೈದ್ಯಕೀಯ ಪರಿಷತ್ ಕಾಯ್ದೆ 1984 (ನಂ.52 1984) ಈ ಕಾಯ್ದೆಯು 1984ರಲ್ಲಿ ಜಾರಿಯಾಗಿದ್ದು ಇದನ್ನು ಭಾರತ ಸರ್ಕಾರದ ದಿನಾಂಕ 21ನೇ ಆಗಸ್ಟ್ 1984ರ ವಿಶೇಷ ಗೆಜೆಟ್ನಲ್ಲಿ ಪ್ರಕಟಿಸಲಾಗಿದ್ದು, ಸದರಿ ಕಾಯ್ದೆಯನ್ನು ಅಳವಡಿಸಿಕೊಂಡು ರಾಜ್ಯ ಸರ್ಕಾರವು ಕರ್ನಾಟಕ ಪಶುವೈದ್ಯಕೀಯ ಪರಿಷತ್ ನಿಯಮಗಳು 1998, ಈ ನಿಯಮಗಳನ್ನು ರೂಪಿಸಿದ್ದು, ಇವುಗಳನ್ವಯ ರಾಜ್ಯದಲ್ಲಿ ಪಶುವೈದ್ಯಕೀಯ ವೃತ್ತಿಯ ನಿಯಂತ್ರಣ ಮತ್ತು ರಾಜ್ಯ ಪಶುವೈದ್ಯಕೀಯ ವೃತ್ತಿನಿರತ ಪಶುವೈದ್ಯರ ರಿಜಿಸ್ಟರ್ನ ನಿರ್ವಹಣೆ ಕಾರ್ಯಾವನ್ನು ನಿರ್ವಹಿಸಲಾಗುತ್ತಿದೆ.

ಪಶುವೈದ್ಯಕೀಯ ಪರಿಷತ್ತು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಇದು ಈ ಕೆಳಕಂಡ 11 ಜನ ಸದಸ್ಯರ ಪರಿಷತ್ತನ್ನು ಹೊಂದಿದೆ:

ಕ್ರಮ ಸಂಖ್ಯೆ ವಿವರ ಸದಸ್ಯತ್ವದ ವಿಧ ಸಂಖ್ಯೆ
1 ಚುನಾಯಿತ ಸದಸ್ಯರು ಚುನಾಯಿತ 4
2 ರಾಜ್ಯದ ಪಶುವೈದ್ಯಕೀಯ ಸಂಸ್ಥೆಯ ಮುಖ್ಯಸ್ಥರು ನಾಮ ನಿರ್ದೇಶಿತ: ಪದನಿಮಿತ್ತ 1
3 ನಾಮ ನಿರ್ದೇಶಿತ ಸದಸ್ಯರು ಸರ್ಕಾರದಿಂದ ನಾಮನಿರ್ದೇಶಿತ 3
4 ನಿರ್ದೇಶಕರು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ನಾಮ ನಿರ್ದೇಶಿತ: ಪದನಿಮಿತ್ತ 1
5 ಅಧ್ಯಕ್ಷರು, ಕರ್ನಾಟಕ ಪಶುವೈದ್ಯಕೀಯ ಸಂಘ ನಾಮ ನಿರ್ದೇಶಿತ 1
6 ನಿಬಂಧಕರು, ಕರ್ನಾಟಕ ಪಶುವೈದ್ಯಕೀಯ ಪರಿಷತ್ತು ನಾಮ ನಿರ್ದೇಶಿತ: ಪದನಿಮಿತ್ತ 1

ಪರಿಷತ್ತಿನ ಸದಸ್ಯರನ್ನೊಳಗೊಂಡ ಕಾಯ್ಕಾರಿ ಸಮಿತಿ ಮತ್ತು ಹಣಕಾಸು ಸಮಿತಿಗಳನ್ನು ರಚಿಸಲಾಗಿದ್ದು, ಪರಿಷತ್ತಿನ ಅಧ್ಯಕ್ಷರು ಸದರಿ ಸಮಿತಿಗಳ ಅಧ್ಯಕ್ಷರಾಗಿದ್ದು, ನಿಬಂಧಕರು ಸದರಿ ಅಮಿತಿಗಳ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿಗೆ ಅಗತ್ಯ ಅನುದಾನವನ್ನು ಕೇಂದ್ರ ಪುರಸ್ಕೃತ ಯೋಜನೆ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ 50:50 ಅನುಪಾತದಲ್ಲಿ ರಾಜ್ಯ ಸರ್ಕಾರದಿಂದ ಪಶುಸಂಗೋಪನಾ ಇಲಾಖೆ ಮೂಲಕ ಒದಗಿಸಲಾಗುತ್ತಿದೆ. ಸದರಿ ಅನುದಾನವನ್ನು ಕೇಂದ್ರ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ, ಕೃಷಿ ಮಂತ್ರಾಲಯ ಇದರ ಯೋಜನಾ ಕಾರ್ಯಕ್ರಮ “ಪ್ರೋಫೆಶನಲ್ ಎಫಯೆನ್ಸಿ ಡೆವೆಲಪ್ಮೆಂಟ್” (ಪಿಇಡಿ) ಇದರ ಅಡಿ ಒದಗಿಸಲಾಗುತ್ತಿದೆ.

ಸ್ಥಳ ಉಪಸ್ಥಿತಿ: ಕರ್ನಾಟಕ ಪಶುವೈದ್ಯಕೀಯ ಪರಿಷತ್ ಕಾರ್ಯಾಲಯವು ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿದ್ದು ಅದು ಈ ವಿಳಾಸದಲ್ಲಿ ಅಸ್ಥಿತ್ವದಲ್ಲಿರುತ್ತದೆ: ಕರ್ನಾಟಕ ಪಶುವೈದ್ಯಕೀಯ ಪರಿಷತ್ತು, ಪಶುವೈದ್ಯಕೀಯ ಕಾಲೇಜ್ ಆವರಣ, ಹೆಬ್ಬಾಳ ಅಂಚೆ, ಬೆಂಗಳೂರು-560024. ಈ ಸಂಸ್ಥೆಯು ರೈಲು/ಬಸ್ ನಿಲ್ದಾಣದಿಂದ 6 ಕಿ.ಮೀ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 30.ಕಿ.ಮಿ ಅಂತರದಲ್ಲಿದೆ.

ಇತ್ತೀಚಿನ ನವೀಕರಣ​ : 19-10-2020 01:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಪಶುವೈದ್ಯಕೀಯ ಪರಿಷತ್ತು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080